About Us

ಸಂವೇದನಾ …. ಹೆಸರೇ ಎಲ್ಲವನ್ನೂ ಹೇಳುತ್ತದೆ. ಸಂವೇದನೆಯ ಅವಶ್ಯಕತೆ ಇದ್ದೆಡೆ ಸ್ಪಂದನೆ ಮತ್ತು ಸಂವೇದನೆ ಮೂಡಬೇಕಾದ ಮನಸ್ಸುಗಳು ಭಾವನಾರಹಿತವಾಗಿದ್ದಾಗ ಅಲ್ಲಿ ಸಂವೇದನೆಯನ್ನು ಚಿಗುರಿಸುವ ಕಾರ್ಯ.

ವರ್ಷದಿಂದ ವರ್ಷಕ್ಕೆ ಕುಡಿಯು ನೀರಿಗಾಗಿ ಹಾಹಾಕಾರ ಹೆಚ್ಚುತ್ತಿದೆ. ಫಲವತ್ತಾದ ನೆಲ ನೀರಿಲ್ಲದೆ ಹಾಳು ಬೀಳುತ್ತಿದೆ!! ಜಗತ್ತಿನ ಶೇ.೭೦ ಭೂಭಾಗವನ್ನು ನೀರು ಆವರಿಸಿರುವಾಗ ಮಾನವನಿಗೆ ಈ ಕೊರತೆ ನೀಗಿಸಲು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯವಿದೆ ಎಂದು ತೋರಿಸಿಕೊಟ್ಟ , ಮರುಭೂಮಿಯಂತಿದ್ದ ಎಕರೆಗಟ್ಟಲೆ ಒಣಪ್ರದೇಶದಲ್ಲಿ ಕಾಡುಬೆಳೆಸಿ ಹಸಿರಿನಿಂದ ನಳನಳಿಸುವಂತೆ ಮಾಡಿ ತನ್ಮೂಲಕ ಪರಿಸರದ ಹಲವು ಕಿಲೋಮೀಟರ್ರೆಗಿನ ಪ್ರದೇಶದ ಉಷ್ಣಾಂಶವನ್ನು ತಗ್ಗಿಸಿದ ಆಚಾರ್ಯ ಜಗ್ಗಿ ವಾಸುದೇವ್‌ರಂತ ಸಾಧಕರ ದಾರಿಯಲ್ಲಿ ಒಂದೆರಡು ಹೆಜ್ಜೆಯನ್ನಾದರೂ ಹಾಕುವ ಸಂಕಲ್ಪ ಸಂವೇದನಾ ಫೌಂಡೇಶನ್‌ನದ್ದು.

ಪ್ರಾರಂಭದಲ್ಲಿ ಉಡುಪಿ ಜಿಲ್ಲೆಯ ಸುತ್ತಮುತ, ಕ್ರಮೇಣ ರಾಜ್ಯಾದ್ಯಂತ ಕಾಡುಗಳನ್ನು ಬೆಳೆಸಿ ಆ ಮೂಲಕ ಮನುಷ್ಯರಿಗೆ ಮಾತ್ರವಲ್ಲದೆ ಸಹಸ್ರಾರು ಸಂಖ್ಯೆಯ ಕಾಡುಪ್ರಾಣಿಗಳು, ಪಕ್ಷಿಗಳು, ಅಪಾರ ಸಂಖ್ಯೆಯ ಜೀವಜಂತುಗಳು, ಅಸಂಖ್ಯ ಕೀಟಗಳಿಗೆ ಆಶ್ರಯ ತಾಣ.. ಹೀಗೆ ಮತ್ತೆ ಪ್ರಕೃತಿಯ ಪುನರ್‌ನಿರ್ಮಾಣ ನಮ್ಮ ಸಂಸ್ಥೆಯ ಮುಖ್ಯ ಸಂಕಲ್ಪ. ಈಗಾಗಲೇ ಉಡುಪಿಯ ಅದಮಾರು ಮಠದ ಪೂಜ್ಯ ಶ್ರೀಶ್ರೀಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ’ಕಾಡುಗಳ ನಿರ್ಮಾಣ’ದ ಸಂವೇದನಾ ಫೌಂಡೇಶನ್’ನ ವಿಶಿಷ್ಠ ಸಂಕಲ್ಪಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿ ಆಶೀರ್ವದಿಸಿ ಸಂಸ್ಥೆಯ ಮೊದಲ ಕಾಢು ನಿರ್ಮಾಣಕ್ಕೆ ಜಾಗ ನೀಡಲು ಒಪ್ಪಿಗೆ ನೀಡಿರುತ್ತಾರೆ.

ಸಮಾಜದಲ್ಲಿ ನೊಂದ, ಅಶಕ್ತ ಮನಸ್ಸುಗಳು ಸಾವಿರಾರು. ಆ ಮನಸ್ಸುಗಳಿಗೆ ಸಾಂತ್ವನ ಹೇಳುವ ಸಹೃದಯರೂ, ಸಂಸ್ಥೆಗಳೂ ಅನೇಕ ಸಂಖ್ಯೆಯಲ್ಲಿರುವುದು ಆನಂದದ ಸಂಗತಿ. ಸಂಘ ಸಂಸ್ಥೆಗಳ ಜೊತೆಗೆ ದೇಶದ ವರ್ತಮಾನ ಮತ್ತು ಭವಿಷ್ಯದ ರುವಾರಿಗಳಾದ ಕಾಲೇಜು ವಿದ್ಯಾರ್ಥಿಗಳ ಮನಸ್ಸಿನಲ್ಲೂ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜಮುಖಿ ಚಿಂತನೆಯ ಸಂವೇದನೆಯನ್ನು ಮೂಡಿಸುವುದು ಸಂಸ್ಥೆಯ ಮತ್ತೊಂದು ಸಂಕಲ್ಪ.

ಸಂವೇದನಾ ಫೌಂಡೇಶನ್’ನ ಸಂಕಲ್ಪಗಳಿಗೆ ನಿಮ್ಮ ಸಲಹೆ, ಪ್ರೋತ್ಸಾಹ, ಸಹಕಾರವೇ ಶ್ರೀರಕ್ಷೆ.